150 ವರ್ಷಗಳಾದರೂ ಈ ಮಹಾತ್ಮನ ಅರಿಯಲು ಸಾದ್ಯವಾಗಲಿಲ್ಲವೇ?
ಅದೊಂದು ಕಾಲ ಪಾಶ್ಚಾತ್ಯರು ಪೌರಾತ್ಯರ ಮೇಲೆ ಪದೇ ಪದೇ ದಾಳಿ ಮಾಡಿ ಲೂಟಿ ಮಾಡುತಿದ್ದ ಸಮಯ. ಈಗಿರುವಾಗ ಪೌರಾತ್ಯ ಪುರುಷನೊಬ್ಬ ಪಾಶ್ಚಾತ್ಯರ ಸೊಕ್ಕು ಹಡಗಿಸಿದ ಕಥೆ ಕೇಳಿದ್ದೀರಾ.
ಒಮ್ಮೆ ಪಾಶ್ಚಾತ್ಯ ರಾಷ್ಟ್ರದಲ್ಲಿ ಕತ್ತಲ್ಲಲ್ಲಿ ಎಲ್ಲರು ಮಲಗಿದ ನಂತರ ಅಳುವ ಸದ್ದೊಂದು ಕೇಳಿಸಿತು " ಹೇ ಜಗನ್ಮಾತೆ ನನ್ನ ರಾಷ್ಟ್ರದಲ್ಲಿ ಎಷ್ಟೋ ಜನ ತಿನ್ನಲಿಕ್ಕೆ ಅನ್ನ ಇಲ್ಲದೆ, ಮಲಗಲು ಜಾಗ ಇಲ್ಲದೆ ಚಳಿಯಲ್ಲಿ ಒದ್ದಾಡುವಾಗ . ನಾನೇಗೆ ಈ ಸುಖದ ಸುಪ್ಪತ್ತಿಗೆಯ ಮೇಲೆ ಮಲಗಲಿ" ಎಂದು.
ಈಗಿನ ಕಾಲದಲ್ಲಿ ಈ ಮಾತು ಅದು ಸುಳ್ಳು ಅಥವಾ ಕಟ್ಟು ಕಥೆ ಇರಬೇಕು. ಇದು ನಿಮ್ಮ ಅನಿಸಿಕೆ ಆಗಿದ್ದರೆ ಅದು ತಪ್ಪು ಈ ಮಾತು ಆಡಿದ್ದು ಬೇರೆ ಯಾರು ಅಲ್ಲ ಸ್ವಾಮಿ ವಿವೇಕಾನಂದ .
ಯಾವ ಅಮೇರಿಕಾ ಇಡೀ ಜಗತ್ತಿನಲ್ಲಿ ತನ್ನನ್ನು ಪಾಂಡಿತ್ಯದಲ್ಲಾಗಲಿ ಧಾರ್ಮಿಕತೆಯಲ್ಲಾಗಲಿ ಮೀರಿಸಲುು ಸಾಧ್ಯವಿಲ್ಲ ಎಂದು ಭಾವಿಸಿತ್ತೋ ಅಂತ ಅಮೇರಿಕಾ ಪಂಡಿತರ ಸೊಕ್ಕು ಹಡಗಿಸಲು ಭಾರತದಿಂದ ಹೊರಟ ಬಾಣವೇ ಸ್ವಾಮಿ ವಿವೇಕಾನಂದ ಎನ್ನುವ ಬ್ರಹ್ಮಾಸ್ತ್ರ. ಮೊದಲಿಗೆ ವೇದಿಕೆಯ ಮುಂಭಾಗದ ಜನರನ್ನು ನೋಡಿಯೇ ಎದರಿದ ಈ ತರುಣ ಏನು ಮಾತನಾಡಬಲ್ಲನು ಎಂದು ಕ್ರಿಶ್ಚಿಯನ್ ಪಾದ್ರಿಗಳೆಲ್ಲ ಮೆರೆಯುತ್ತಿದ್ದರು. ಆದರೆ ಇವನ ಸಿಡಿಲಸ್ನಿಗ್ದ ಮಾತುಗಳನ್ನು ಕೇಳಿ ಇಡೀ ಅಮೆರಿಕಾನೇ ಬೆಕ್ಕಸಬೆರಗಾಗಿ ಭಾರತದ ಮುಂದೆ ಮಂಡಿಯೂರಿ ಕೂರಬೇಕಾಯ್ತು.
ಜೀವನದಲ್ಲಿ ಕೇವಲ ಎರಡು ರಾತ್ರಿ ಮಾತ್ರ ಸರಿಯಾಗಿ ನಿದ್ದೆ ಮಾಡಿ ಇನ್ನ ಮಿಕ್ಕ ರಾತ್ರಿಯೆಲ್ಲ ಈ ದೇಶದ ಪುನರ್ನಿರ್ಮಾಣದ ಬಗ್ಗೆ ಯೋಚಿಸುತ್ತ ಇದ್ದರಲ್ಲ ಈ ಮಹಾತ್ಮಾ. ಇವ್ರನ್ನ "ಏನು ಕೆಲಸ ಮಾಡದೆ ಬಿಟ್ಟಿ ಬಾಷಣದಿಂದಲೇ ಪ್ರಚಾರಾ ತೆಗೆದುಕೊಂಡ ಭಿಕಾರಿ ಸನ್ಯಾಸಿ", ಎಂದು ಜರಿಯುತ್ತಾರಲ್ಲ ಕಮ್ಯುನಿಸ್ಟರು 150 ವರ್ಷಗಳಾದರೂ ಈ ಮಹಾತ್ಮನ ಅರಿಯಲು ಸಾದ್ಯವಾಗಲಿಲ್ಲವೇ?
ಯುವ ಜನಾಂಗ ಓದಬೇಕಿರುವ ಅಂಕಣ..
ReplyDeleteA great blog on great soul....a must read for everyone ❤️ inspiring blog 🔥
ReplyDeleteGreat content, Keep it up
ReplyDeleteRealising great personality is possible for two people one who believe's him and who loves him.great blog .
ReplyDeleteಅಧ್ಭುತವಾದ ಮಾಹಿತಿ
ReplyDeleteಪ್ರತಿ ಯುವಕನಿಗೂ ತಲುಪಬೇಕು
This comment has been removed by the author.
ReplyDelete