ಕಟ್ಟುವೆವೆಮ್ಮಯ ಭಾರತವ



ಒಡಲೊಳು ತುಂಬಿದ ವಿಷವನು ತೆಗೆಯಲು
ಸೆರಗಲಿ ಅವಿತ ದ್ರೋಹಿಯ ಬಡಿಯಲು
ಯುವ ಪಡೆಯೊಂದು ಸಾಗಿರಲು
ದೂರದಿ ನಿಂತು, ಮನೆಯಲಿ ಕುಳಿತು
ಕಟ್ಟುವೆವೆಮ್ಮಯ ಭಾರತವ||

ದೂರದ ಶಿಖರದಿ ಹುಟ್ಟಿದ ಮಾರಿಗೆ
ಮೋಹ ಜನಗಳ ಸಾವಿನ ಸಾರಿಗೆ
ಬಂದಿದೆ ದಾಟಿ ನಮ್ಮಯ ಹಾದಿಗೆ
ಕೊರೊನ ತಂದಿದೆ ಜನರನು ಬೀದಿಗೆ
ದೂರದಿ ನಿಂತು, ಮನೆಯಲಿ ಕುಳಿತು
ಕಟ್ಟುವೆವೆಮ್ಮಯ ಭಾರತವ||

ಗಡಿಯಲಿ ನಿಂತ ಸೈನಿಕ ನೊಂದ
ಮಾಸ್ಕ್ ಒಳಗಡೆ ವೈದ್ಯನು ಬೆಂದ
ಕ್ರೂರಿಯ ಆಟ ಸಾಧುವ ಕೊಂದ
ಸಿಕ್ಕಿತೇ ನಿಮಗೆ ಆನಂದ?
ದೂರದಿ ನಿಂತು, ಮನೆಯಲಿ ಕುಳಿತು
ಕಟ್ಟುವೆವೆಮ್ಮಯ ಭಾರತವ||

ಮನೆಯಲಿ ಕೂರಲು ಬೇಸರ ತಂದಿದೆ
ದೂರದಿ ನಿಲ್ಲಲು ಪ್ರೀತಿಯು ಕೊರಗಿದೆ
ದೂರದಿ ನಿಲ್ಲದೆ, ಮನೆಯಲಿ ಕೂರದೆ
ಬರುವರ ಬಲಿಗೆ ಕೊರೊನವು ಕಾದಿದೆ
ದೂರದಿ ನಿಂತು, ಮನೆಯಲಿ ಕುಳಿತು
ಕಟ್ಟುವೆವೆಮ್ಮಯ ಭಾರತವ||

ಚಪ್ಪಾಳೆ ತಟ್ಟಿ, ದೀಪವ ಹಚ್ಚಿ
ವೈದ್ಯಯೋಧರ ಕಾರ್ಯವ ಮೆಚ್ಚಿ
ಬರಲಿ ಗುಣಮುಖರ ಸಂಖ್ಯೆಯು ಹೆಚ್ಚಿ
ತೊಲಗಲಿ ಬೇಗ ಕೊರೊನ ಕೊಚ್ಚಿ
ದೂರದಿ ನಿಂತು, ಮನೆಯಲಿ ಕುಳಿತು
ಕಟ್ಟುವೆವೆಮ್ಮಯ ಭಾರತವ||

    - ಗಗನ್ ಅಬ್ಬಿನಹೊಳೆ

Comments

  1. ಸಮಯಕ್ಕೆ ಸರಿಯಾದ ಕವನ,ದೇಶಾಭಿಮಾನ ಎದ್ದು ಕಾಣುತ್ತಿದೆ. Keep it up👍

    ReplyDelete
  2. ಅಮೋಗವಾದಂತಹ ಪ್ರಯತ್ನ

    ReplyDelete
  3. This comment has been removed by the author.

    ReplyDelete
  4. Really super 👌👌👌👍👍👍

    ReplyDelete
  5. ದೂರಿದಿ ನಿಂತು, ಮನೆಯಲಿ ಕುಳಿತು
    ಕಟ್ಟುವೆವು ನಾವು ನಮ್ಭ ಹೆಮ್ಮೆಯ ಭಾರತವ.

    ReplyDelete
  6. ಮನಮೋಹಕವಾಗಿದೆ ಅಣ್ಣ.

    ReplyDelete
  7. Dooradinna nodi dooradinda namskarisuva e kavitege dooradindale namskar

    ReplyDelete
  8. ಚೆನ್ನಾಗಿದೆ ಅಣ್ಣ. ಬರವಣಿಗೆಯನ್ನು ಮುಂದುವರೆಸಿ.

    ReplyDelete
  9. ಓಂ ನಮಃ ಶಿವಾಯ

    ಎಂತಹ ವಿಚಾರ ವಿನಿಮಯ. . .

    ಧನ್ಯವಾದಗಳು,

    ಪರಮೇಶಾರಾಧ್ಯ ಕಾಡುಗೋಡಿ ಬೆಂಗಳೂರು

    ReplyDelete
  10. ಈ ಕಳವಳಕಾರಿ ಸಂಧಭ೯ದಲ್ಲಿ ಕಟ್ಟುವ ಕಾಯ೯ಕ್ಕೆ ಮನಸ್ಸನ್ನು ಹದಗೊಳಿಸುವ ಕವನ.... ತುಂಬಾ ಚನ್ನಾಗಿದೆ.ನಿಮ್ಮಿಂದ ಹೆಚ್ಚು ಬರಹಗಳು ಬರಲಿ....

    ReplyDelete
  11. ತುಂಬಾ ಚೆನ್ನಾಗಿದೆ...

    ReplyDelete
  12. Energetic and meaningful lines. 🙏

    ReplyDelete
  13. Awesome Anna 👌👌
    More to go😊

    ReplyDelete
  14. ಇನ್ನೂ ಹೆಚ್ಚು ಬರವಣಿಗೆಗಳನ್ನು ನಿರೀಕ್ಷಿಸುತ್ತೇವೆ

    ReplyDelete
  15. ಇನ್ನೂ ಹೆಚ್ಚು ಬರವಣಿಗೆಗಳನ್ನು ನಿರೀಕ್ಷಿಸುತ್ತೇವೆ

    ReplyDelete
  16. ಅರ್ಥ ಪೂರ್ಣವಾಗಿದೆ

    ReplyDelete

Post a Comment

Popular posts from this blog

150 ವರ್ಷಗಳಾದರೂ ಈ ಮಹಾತ್ಮನ ಅರಿಯಲು ಸಾದ್ಯವಾಗಲಿಲ್ಲವೇ?

Youth Empowerment in Nation Development